ಕರ್ನಾಟಕ ಸರ್ಕಾರವು 2013-14 ನೇ ಸಾಲಿನ 01-08-2013 ರಿಂದ 1 ರಿಂದ 10 ನೇ ತರಗತಿ ಓದುತ್ತಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲಾ ಮಕ್ಕಳಗೆ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಮಿ.ಲೀ. ಹಾಲನ್ನು ವಾರದಲ್ಲಿ 03 ದಿನ (ಒಂದು ದಿನ ಬಿಟ್ಟು ಒಂದು ದಿನ ) ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು, ದಿನಾಂಕ: 01-08-2013 ರಂದು ಸನ್ಮಾನ್ಯ ಮುಖ್ಯ ಮಂತ್ರಿಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಕ್ಷೀರಭಾಗ್ಯ ಯೋಜನೆಗೆ ರಾಜ್ಯಾದ್ಯಂತ ಚಾಲನೆ ನೀಡಿದರು. ಕ್ಷೀರಭಾಗ್ಯ ಯೋಜನೆಗೆ ಕರ್ನಾಟಕ ಹಾಲು ಮಹಾಮಂಡಳಿಯು ಕಾರ್ಯಕ್ರಮಕ್ಕೆ ಅಗತ್ಯ ಕೆನೆಭರಿತ ಹಾಲಿನ ಪುಡಿಯನ್ನು ಶಾಲಾ ಬಾಗಿಲಿಗೆ ಸರಬರಾಜು ಮಾಡುತ್ತದೆ. ಮಗುವಿಗೆ ಒಂದು ಬಾರಿಗೆ ಕ್ರ.ಸಂ. ಪದಾರ್ಥ/ವಿವರ ಪರಿಮಾಣ ಮೊತ್ತ(ರೂ.ಗಳಲ್ಲಿ) 1 ಹಾಲಿನ ಪುಡಿ 18 ಗ್ರಾಂ 4.59 2 ಸಕ್ಕರೆ 10 ಗ್ರಾಂ 0.32 3 ಇಂಧನ - 0.15 4 ಇತರೆ 0.12 0.12 ಒಟ್ಟು : 5.18 ಅಡುಗೆಯವರ ಗೌರವ ಸಂಭಾವನೆ ಮಾಸಿಕ ರೂ. 100.00 ಮೂಲ : ಸಾರ್ವಜನಿಕ ಶಿಕ್ಷಣ ಇಲಾಖೆ