ಬಂಕಿಮ ಚಂದ್ರ ಚಟರ್ಜಿಯವರು ವಂದೆ ಮಾತರಂ ಹಾಡನ್ನು ಸಂಸ್ಕೃತದಲ್ಲಿ ಬರೆದರು. ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜನರಿಗೆ ಸ್ಪೂರ್ತಿಯ ಸೆಲೆಯಾಗಿತ್ತು. ಇದಕ್ಕೆ “ಜನ ಗಣ ಮನ “ ದಷ್ಟೆ ಗೌರವದ ಸ್ಥಾನವಿದೆ. ಇದನ್ನು ಪ್ರಥಮ ಬಾರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನದಲ್ಲಿ 1896 ರಲ್ಲಿ ಹಾಡಲಾಯಿತು. ಅದರ ಮೊದಲ ಚರಣವನ್ನು ಕೆಳಗೆ ಕೊಡಲಾಗಿದೆ. ವಂದೆ ಮಾತರಂ! ಸುಜಲಾಂ, ಸುಫ ಲಾಂ, ಮಲಯಜ ಶೀತಲಾಂ, ಸಸ್ಯ ಶ್ಯಾಮಲಾಂ ಮಾತರಂ! ವಂದೆ ಮಾತರಂ ! ಶುಭ್ರ ಜ್ಯೋಸ್ನಾ ಪುಲಕಿತ ಯಾಮಿನಿ, ಫುಲ್ಲ ಕುಸುಮಿತ ಧೃಮದಳ ಶೋಭಿನಿ, ಸುಹಾಸಿನಿ ಸುಮಧುರ ಭಾಷಿಣಿ, ಸುಖದಾಂ ವರದಾಂ ಮಾತರಂ! ವಂದೆ ಮಾತರಂ ವಂದೆ ಮಾತರಂ ! ಶ್ರೀ ಅರವಿಂದರು ಮಾಡಿದ ಇಂಗ್ಲಿಷ್ ಭಾಷಾಂತರದ ಕನ್ನಡ ಭಾವಾನುವಾದ ಕೆಳಗೆ ನೀಡಿದೆ : ನಮನ ತಾಯೆ ನಮನ ಜಲ ಸಮೃದ್ಧಿ- ಫಲ ಸಮೃದ್ಧಿ, ತೆಂಕಣ ಗಾಳಿಯ ತಂಪು, ಸುಗ್ಗಿಯ ಬೆಳೆಯ ಸೊಂಪು , ತಾಯೇ! ಅವಳ ರಾತ್ರಿಗಳು, ಬೆಳದಿಂಗಳಲಿ ಬೆಳಗುವವು, ಅವಳ ಭುವಿ ಮರಗಿಡ, ಹೂಗಳಿಂದ ಸುಂದರವು, ನಗುವೂ ಸಿಹಿ, ಮಾತೂ ಸವಿ, ವರ ಕೊಡುವ ತಾಯೆ ಸುಖ ಕೊಡುವ ತಾಯೆ ನಮನ ನಿನಗೆ ನಮನ ನಿನಗೆ, ಮೂಲ: ಪೋರ್ಟಲ್ ತಂಡ