ಫಾಂಟ್ ನ ಆಯ್ಕೆ: ನೀವು ಒಂದು ನಿರೂಪಣೆಯ ಶೀರ್ಷಿಕೆಯು ವಿಶಿಷ್ಟವಾಗಿ ತೋರಬೇಕೆಂದು ಬಯಸುತ್ತೀರಿ. ನೀವು ಶೀರ್ಷಿಕೆಯ ಲಿಪಿಯನ್ನು ಬದಲಾಯಿಸುವುದರಿಂದ ಹಾಗೆ ಮಾಡಬಹುದು. ನಿರೂಪಣೆಯ ಶೀರ್ಷಿಕೆ ಮತ್ತು ಸ್ಲೈಡ್ನ ಶೀರ್ಷಿಕೆಗಳಿಗೆ, ಫಾಂಟ್ ಗಳನ್ನು ಬದಲಾಯಿಸ ಬಹುದು. ಶೀರ್ಷಿಕೆಯನ್ನು ಆಯ್ಕೆ ಮಾಡಿ. ಲಿಪಿಯೊಂದನ್ನು ಉದಾಹರಣೆಗೆ, ಫಾರ್ಮಾಟಿಂಗ್ ಟೂಲ್ ಬಾರ್ ಮೇಲಿನ, ಫಾಂಟ್ನ ಪಟ್ಟಿಯೊಳಗೆ ಇರುವ ವಿವಿಧ ಫಾಂಟ್ಗಳಲ್ಲಿ ಯಾವುದನ್ನು ಬೇಕಾದರೂ ಕ್ಲಿಕ್ ಮಾಡ ಬಹುದು. ಲಿಪಿಯ ಗಾತ್ರವನ್ನು ಹಿಗ್ಗಿಸುವುದು ಮತ್ತು ಕುಗ್ಗಿಸುವುದು: ನೀವು ಶೀರ್ಷಿಕೆಯ ಗಾತ್ರವನ್ನು ಹೆಚ್ಚಿಸಲು ಮತ್ತು ಕಡಿಮೆ ಮಾಡಲು, ಲಿಪಿಯ ಗಾತ್ರವನ್ನು ಬದಲಾಯಿಸಬಹುದು. ಶೀರ್ಷಿಕೆಯನ್ನು ಆಯ್ಕೆ ಮಾಡಿ ಫಾರ್ಮಾಟಿಂಗ್ ಟೂಲ್ ಬಾರ್ನ ಮೇಲಿರುವ ಫಾಂಟ್ ಸೈಜ್ನ ಪಟ್ಟಿಯಿಂದ, ನಿಮಗೆ ಬೇಕಾದ ಗಾತ್ರವನ್ನು ಕ್ಲಿಕ್ ಮಾಡಿ. ಲಿಪಿಯ ಶೈಲಿಯನ್ನು ಬದಲಿಸುವುದು: ಲಿಪಿಯ ಬದಲಾವಣೆ ಮಾಡುವುದಲ್ಲದೇ, ಲಿಪಿಯ ಶೈಲಿಗಳನ್ನು ಉಪಯೋಗಿಸಿ ನೀವು ಪಠ್ಯಕ್ಕೆ ರೂಪ ನೀಡಬಹುದು. ನೀವು ಫಾರ್ಮಾಟಿಂಗ್ ಟೂಲ್ ಬಾರ್ ಮೇಲಿನ, ಇಟಾಲಿಕ್ಸ್, ಬೋಲ್ಡ್ ಮತ್ತು ಅಂಡರ್ ಲೈನ್ ಗುಂಡಿಯನ್ನು ಉಪಯೋಗಿಸಿ, ಲಿಪಿಯನ್ನು ಓರೆಯಾಗಿ, ದಪ್ಪವಾಗಿ ಹಾಗೂ ಅಂಡರ್ ಲೈನ್ ಮಾಡಬಹುದು. ಲಿಪಿಯ ಬಣ್ಣವನ್ನು ಬದಲಿಸುವುದು: ಪಠ್ಯವನ್ನು ಆಯ್ಕೆ ಮಾಡಿ. ಫಾರ್ಮಾಟಿಂಗ್ ಟೂಲ್ ಬಾರ್ ಮೇಲಿನ ಫಾಂಟ್ ಕಲರ್ ಪಟ್ಟಿಯಲ್ಲಿ, ನಿಮಗೆ ಬೇಕಾದ ಬಣ್ಣವನ್ನು ಕ್ಲಿಕ್ ಮಾಡಿ, ನಿಮಗೆ ಬೇಕಾದ ಬಣ್ಣವನ್ನು ಆಯ್ದು ಕೊಳ್ಳಿ. ಮೂಲ: ಕರ್ನಾಟಕ ಶಿಕ್ಷಣ