ನೀವು ವರ್ಡ್ ಪ್ರೊಸೆಸರ್ ವಿಂಡೋವನ್ನು ತೆರೆದಿದ್ದೀರಿ. ಪರದೆಯ ಮೇಲೆ ಕಾಣುವ ಖಾಲಿಯಾದ ಬಿಳಿಯ ಸ್ಥಳವನ್ನು ಡಾಕ್ಯುಮೆಂಟ್ ಏರಿಯಾ ಎಂದು ಕರೆಯುತ್ತಾರೆ. ಈ ಸ್ಥಳದಲ್ಲಿ ನೀವು ಪಠ್ಯ, ಚಿತ್ರಗಳು ಮತ್ತು ಟೇಬಲ್ಗಳನ್ನು ಸೇರಿಸಬಹುದು. ವರ್ಡ್ ಪ್ರೊಸೆಸರ್ ಇಂಟರ್ಫೇಸ್ ನ ಇತರ ಭಾಗಗಳು ಕೆಳಗಿನಂತಿವೆ. ಟೈಟಲ್ ಬಾರ್ : ಟೈಟಲ್ ಬಾರ್ , ದಾಖಲೆಯ ಮತ್ತು ಅಪ್ಲಿಕೇಶನ್ನ ಹೆಸರನ್ನು ಪ್ರದರ್ಶಿಸುತ್ತದೆ. ಅನ್ ಟೈಟಲ್ಡ್ 1 ವರ್ಡ್ ಪ್ರೊಸೆಸರ್ ಎಂದ ಟೈಟಲ್ ಬಾರ್ ಪ್ರದರ್ಶಿಸುತ್ತದೆ ಎಂದಿಟ್ಟು ಕೊಳ್ಳಿ. ಇಲ್ಲಿ, ಅನ್ ಟೈಟಲ್ಡ್ 1 ಎಂಬುದು ದಾಖಲೆಯ ಹೆಸರು ಮತ್ತು ವರ್ಡ್ಪ್ರೊಸಸರ್ ಎಂಬುದು ಅಪ್ಲಿಕೇಶನ್ನ ಹೆಸರು . ಮೆನು ಬಾರ್ : ಮೆನು ಬಾರ್ : ನಿಮಗಾಗಿ ವರ್ಡ್ ಪ್ರೊಸೆಸರ್ ನಿರ್ವಹಿಸಬೇಕಾದ ಕಾರ್ಯಗಳಿಗೆ ಸೂಚನೆಗಳನ್ನು ಕೊಡಲು ಸಾಧ್ಯವಾಗಿಸುವಂತಹ ಕಮಾಂಡ್ ಗಳನ್ನು ಮೆನು ಬಾರ್ ಒದಗಿಸುತ್ತದೆ. ಉದಾಹರಣೆಗೆ, ವ್ಯೂ (view) ಒದಗಿಸುವ ಕಮಾಂಡ್ಗಳನ್ನು ಉಪಯೋಗಿಸಿ ನೀವು ದಾಖಲೆಯನ್ನು ವಿವಿಧ ರೀತಿಯಲ್ಲಿ ವೀಕ್ಷಿಸಬಹುದು. ಟೂಲ್ ಬಾರ್ : ಟೂಲ್ ಬಾರ್ ಪದೇ ಪದೇ ನಿರ್ವಹಿಸುವ ಕಾರ್ಯಗಳಿಗೆ ಗುಂಡಿಗಳ ರೂಪದಲ್ಲಿ ಶಾರ್ಟ್ ಕಟ್ ಗಳನ್ನು ಒದಗಿಸುತ್ತದೆ. ರೂಲರ್ಸ್ : ರೂಲರ್ಸ್ ಎಂಬುದು ಡಾಕ್ಯುಮೆಂಟ್ ಏರಿಯಾದ ಮೇಲ್ಭಾಗದಲ್ಲಿ ಮತ್ತು ಎಡಪಕ್ಕದಲ್ಲಿ ಹಾಯ್ದು ಹೋಗುವ ಬಂಧನಾರೇಖೆಗಳು. ಈ ಬಂಧನಾರೇಖೆಗಳನ್ನು ಉಪಯೋಗಿಸಿ , ಅಂಚುಗಳನ್ನು ಬದಲಾಯಿಸಬಹುದು ಮತ್ತು ಪಠ್ಯವನ್ನು ಪುಟದಲ್ಲಿ ಜೋಡಿಸಬಹುದು. ಪಾಯಿಂಟ್ ಅಥವಾ ಕರ್ಸರ್ ಪಾಯಿಂಟ್ :ಇನ್ಸರ್ಷನ್ ಇನ್ಸರ್ಷನ್ ಪಾಯಿಂಟ್ ಎಂಬುದು ಮಿನುಗುತ್ತಿರುವ ಒಂದು ಉದ್ದ ಗೆರೆ ಮತ್ತು ಇದು ಪರದೆಯ ಮೇಲಿನ ಯಾವ ಸ್ಥಳ ದಲ್ಲಿ ಪಠ್ಯ ಮತ್ತು ಗ್ರಾಫಿಕ್ಸ್ ಗಳು ಇಡಲ್ಪಡುವುದೆಂಬುದನ್ನು ಸೂಚಿಸುತ್ತದೆ ಸ್ಕ್ರಾಲ್ ಬಾರ್: ಸ್ಕ್ರಾಲ್ ಬಾರ್ಸ್ ಗಳನ್ನು ದಾಖಲೆಯೊಳಗೆ ಮೇಲೆ ಮತ್ತು ಕೆಳಗೆ ಅಥವಾ ಎಡಕ್ಕೆ ಮತ್ತು ಬಲಕ್ಕೆ ಚಲಿಸಲು ಉಪಯೋಗಿಸುತ್ತಾರೆ ಸ್ಟೇಟಸ್ ಬಾರ್ : ಚಾಲ್ತಿಯಲ್ಲಿರುವಂತಹ ಪುಟ, ದಾಖಲೆಯೊಳಗೆ ಒಟ್ಟು ಪುಟಗಳ ಸಂಖ್ಯೆ ಮತ್ತು ಇನ್ ಸರ್ಷನ್ ಪಾಯಿಂಟ್ ಈಗಿರುವ ಸ್ಥಳ ಇಂತಹ ವಿವರಗಳನ್ನು ಸ್ಟೇಟಸ್ ಬಾರ್ ಪ್ರದರ್ಶಿಸುತ್ತದೆ. ಮೂಲ: ಕರ್ನಾಟಕ ಶಿಕ್ಷಣ