ಕ್ರಮ ಸಂಖ್ಯೆ 1 ಮಗುವಿನ ಹೆಸರು ಹಿಡಿದು ಕರೆದಾಗ ಮಗುವು ಪ್ರತಿಕ್ರಿಯಿಸುತ್ತಿಲ್ಲವೇ? ಹೌದು / ಇಲ್ಲ 2 ಮಗುವಿಗೆ ವಯೋಸಹಜವಾದ ಸ್ಮರಣಶಕ್ತಿ ಮತ್ತು ಮಾನಸಿಕ ಪ್ರಬುದ್ಧತೆಯಿದೆಯೇ? ಹೌದು / ಇಲ್ಲ 3 ಸಹಪಾಠಿಗಳಿಗೆ ಹೋಲಿಸಿದಾಗ ಮಗುವು ಕಲಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆಯೇ? ಹೌದು / ಇಲ್ಲ 4 ಶೌಚ, ಸ್ನಾನ, ತಲೆಬಾಚುವುದು, ಬಟ್ಟೆ ತೊಟ್ಟುಕುಳ್ಳುವುದು ಮುಂತಾದ ಚಟುವಟಿಕೆಗಳನ್ನು ಮಗುವು ಸ್ವತಂತ್ರವಾಗಿ ನಿರ್ವಹಿಸುತ್ತಿದೆಯೇ? ಹೌದು / ಇಲ್ಲ 5 ಸರಳ ವಿಷಯವನ್ನು ನೆನಪಿಡಲೂ ಕೂಡ ಮಗುವಿಗೆ ಅನೇಕ ಬಾರಿ ಹೇಳಬೇಕಾಗಿ ಬರುತ್ತಿದೆಯೇ? ಹೌದು / ಇಲ್ಲ 6 ಮಗುವಿನ ತಲೆ, ಕಣ್ಣು, ತುಟಿಗಳು ಮುಂತಾದವುಗಳು ಭಿನ್ನ ಸಂರಚನೆಯಿದೆಯೇ? ಹೌದು / ಇಲ್ಲ 7 ಸಂದರ್ಭಾನುಸಾರವಾಗಿ ಅರಿತು ವರ್ತಿಸುವಲ್ಲಿ ಮಗುವು ಸಮಸ್ಯೆ ಎದುರಿಸುತ್ತಿದೆಯೇ? ಹೌದು / ಇಲ್ಲ 8 ಮಗುವು ಭಾವನಾತ್ಮಕ ಮತ್ತು ಆಕ್ರಮಣಕಾರಿ ನಡವಳಿಕೆಯನ್ನು ಹೊಂದಿದೆಯೇ? ಹೌದು / ಇಲ್ಲ 9 ಮಗುವಿಗೆ ತನ್ನ ಸಹಪಾಠಿಗಳೊಂದಿಗೆ ಬೆರೆಯುವಲ್ಲಿ ಸಮಸ್ಯೆಗಳಿವೆಯೇ? ಹೌದು / ಇಲ್ಲ 10 ಜೊಲ್ಲು ಸುರಿಸುವಿಕೆ ಮುಂತಾದ ನೈಸರ್ಗಿಕ ಕರೆಗಳನ್ನು ನಿಯಂತ್ರಿಸಲು ಮಗುವು ವಿಫಲವಾಗುತ್ತಿದೆಯೇ? ಹೌದು / ಇಲ್ಲ 11 ಮಗುವಿಗೆ ನೆನಪಿನ ಶಕ್ತಿಯ ಕೊರತೆ ಮತ್ತು ದೈನಂದಿನ ಜೀವನದಲ್ಲಿನ ಕೆಲಸಗಳನ್ನು ಮಾಡುವಾಗ ಪದೇ ಪದೇ ಹೇಳ ಬೇಕಾಗುತ್ತಿದೆಯೇ? ಹೌದು / ಇಲ್ಲ 12 ಮಗುವಿಗೆ ಡೌನ್ ಸಿಂಡ್ರೋಮ್ (ತೆರೆದ ಬಾಯಿ, ಮೊಂಡ ಮೂಗು, ಕಣ್ಣರೆಪ್ಪೆ ಬಡಿಯುವುದು ಮುಂತಾದವು) ಇದೆಯೇ? ಹೌದು / ಇಲ್ಲ 13 ಮಗುವು ತನ್ನ ಭಾವನೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗುತ್ತಿದೆಯೇ? ಹೌದು / ಇಲ್ಲ 14 ಮಗುವಿಗೆ ಹಸಿವು / ನೀರಡಿಕೆಗಳ ಬಗ್ಗೆ ತಿಳಿಯುತ್ತಿವೆಯೇ? ಹೌದು / ಇಲ್ಲ ಗಮನಿಕೆ: ಮೇಲಿನ ಪ್ರಶ್ನೆಗಳಲ್ಲಿ ೪-೫ ಉತ್ತರಗಳು ಹೌದು ಎಂದಾದರೆ , ಮಗುವನ್ನು ತಜ್ಞವೈದ್ಯರ ಬಳಿಗೆ ಕರೆದೊಯ್ದು ಕೂಲಂಕುಷ ಚಿಕಿತ್ಸೆಗೆ ಒಳಪಡಿಸಬೇಕು. ಮೂಲ: ಪೋರ್ಟಲ್ ತಂಡ