ಕ್ರಮ ಸಂಖ್ಯೆ 1 ಮಗುವು ಜೊಲ್ಲು ಸುರಿಸುತ್ತಿದೆಯೇ? ಹೌದು / ಇಲ್ಲ 2 ಸ್ವಯಂಪ್ರೇರಿತ ಚಲನೆಗಳನ್ನು ನಿಯಂತ್ರಿಸುವಲ್ಲಿ ಮಗುವು ಸಮಸ್ಯೆಗಳನ್ನು ಎದುರಿಸುತ್ತಿದೆಯೇ? ಹೌದು / ಇಲ್ಲ 3 ನಡಿಗೆಯ ಭಂಗಿಯು ಅಸಹಜವಾಗಿದ್ದು, ಸಮತೋಲನ ಸಾಧಿಸುವಲ್ಲಿ ಮಗುವು ತೊಂದರೆಗಳನ್ನು ಎದುರಿಸುತ್ತಿದೆಯೇ? ಹೌದು / ಇಲ್ಲ 4 ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ಮಗುವಿಗೆ ಸಮಸ್ಯೆ ಇದೆಯೇ? ಹೌದು / ಇಲ್ಲ 5 ಆಧಾರವಿಲ್ಲದೆ ಕುರ್ಚಿಯಲ್ಲಿ ಕುಳಿತುಕೊಳ್ಳುವುದು, ನಡೆಯುವುದು, ಕುಣಿಯುವುದು ಮತ್ತು ಸಮತೋಲನ ಕಾಯ್ದು ಕೊಳ್ಳುವುದು ಮುಂತಾದ ಸ್ಥೂಲ ಚಲನಾ ಕೌಶಲ್ಯಗಳಲ್ಲಿ ಮಗುವಿಗೆ ತೊಂದರೆ ಯಿದೆಯೇ? ಹೌದು / ಇಲ್ಲ 6 ವಸ್ತುಗಳನ್ನು ಹಿಡಿಯುವ, ಇಡುವ, ಕತ್ತರಿಸುವ ಮತ್ತು ಬರೆಯುವ ಮೊದಲಾದ ಕಣ್ಣು ಮತ್ತು ಕೈಯ ನಡುವಿನ ಸಮನ್ವಯದ ಸೂಕ್ಷ್ಮ ಚಲನಾ ಕೌಶಲ್ಯಗಳಲ್ಲಿ ಮಗುವು ತೊಂದರೆ ಎದುರಿಸುತ್ತಿದೆಯೇ? ಹೌದು / ಇಲ್ಲ 7 ಅಭಿವ್ಯಕ್ತಿಯಲ್ಲಿ ಮತ್ತು ಮಾತನಾಡುವಾಗ ಉಸಿರಾಟವನ್ನು ನಿಯಂತ್ರಿಸುವಲ್ಲಿ ಮಗು ಸಮಸ್ಯೆಗಳನ್ನು ಎದುರಿಸುತ್ತಿದೆಯೇ? ಹೌದು / ಇಲ್ಲ 8 ಸಮನ್ವಯದ ಕೊರತೆಯಿಂದಾಗಿ ಓದು / ಬರಹದಲ್ಲಿ ಮಗುವಿಗೆ ನೆರವಿನ ಅಗತ್ಯವಿದೆಯೇ? ಹೌದು / ಇಲ್ಲ 9 ಯಾವುದಾದರೂ ಒಂದು ಭಂಗಿಯಲ್ಲಿರುವ ಮಗುವು ಚಲಿಸಲು ಕಷ್ಟ ಪಡುತ್ತಿದೆಯೇ? ಹೌದು / ಇಲ್ಲ 10 ಮಗುವಿಗೆ ತಲೆ ಮತ್ತು ಕತ್ತಿನ ನಿಯಂತ್ರಣ ಸಾಧ್ಯವಾಗುತ್ತಿಲ್ಲವೇ? ಹೌದು / ಇಲ್ಲ 11 ಸ್ನಾಯುಗಳ ಪೆಡಸುತನದಿಂದಾಗಿ ಮಗುವು ಕೈಕಾಲುಗಳನ್ನು ಸುಲಭವಾಗಿ ಚಲಿಸಲಾಗುತ್ತಿಲ್ಲವೇ? ಹೌದು / ಇಲ್ಲ ಗಮನಿಕೆ: ಮೇಲಿನ ಪ್ರಶ್ನೆಗಳಲ್ಲಿ ೪-೫ ಉತ್ತರಗಳು ಹೌದು ಎಂದಾದರೆ , ಮಗುವನ್ನು ತಜ್ಞ ವೈದ್ಯರ ಬಳಿಗೆ ಕರೆದೊಯ್ದು ಕೂಲಂಕುಷ ಚಿಕಿತ್ಸೆಗೆ ಒಳಪಡಿಸಬೇಕು. ಮೂಲ: ಪೋರ್ಟಲ್ ತಂಡ