ಪೋಲೀಸರಿಗೆ ಅಥವ ಮಕ್ಕಳ ಸಹಾಯವಾಣಿಗೆ ತಿಳಿಸಿ .. ಮಕ್ಕಳ ಸಹಾಯವಾಣಿಯು ಮಗುವಿಗೆ ಆಪ್ತ ಸಲಹೆ ಮತ್ತು ಕಾನೂನಿನ ಸಹಾಯ ನೀಡುವುದನ್ನು ಖಚಿತಪಡಿಸಿಕೊಳ್ಳಿ. ಮಾಧ್ಯಮಕ್ಕೆ ಅಂತಿಮ ಪ್ರಯತ್ನವಾಗಿ ವರದಿ ಮಾಡಿ. ನಿಮಗೆ ಕಾನೂನಿನ ಅರಿವಿರಲಿ. ಮೂಲ ಕಾಯಿದೆಗಳನ್ನು ತಿಳಿದಿರುವುದು ಬಹು ಮುಖ್ಯ. ಅವು ಯಾವ ಹಕ್ಕುಗಳನ್ನು ರಕ್ಷಿಸುತ್ತವೆ ಎಂಬುದು ತಿಳಿದಿರಲಿ. ನಿಮಗೆ ಹಕ್ಕುಗಳು ಮತ್ತು ಅವುಗಳ ರಕ್ಷಣೆಗೆ ಇರುವ ಕಾನೂನಿನ ಮಾಹಿತಿ ಇದ್ದರೆ ಮಾತ್ರ ಮಗುವನ್ನು , ಅದರ ತಾಯಿತಂದೆಯರನ್ನು , ಪೋಷಕರನ್ನು , ಸಮುದಾಯವನ್ನು ಕಾನೂನಿನ ಕ್ರಮಕ್ಕೆ ಒಪ್ಪಿಸಬಹುದು. ಕೆಲವು ಸಲ ಅಡಳಿತ ಅಥವ ಪೋಲೀಸರು ಸಹಕರಿಸದೆ ಇರಬಹುದು. ನಿಮಗೆ ಕಾಯಿದೆ ಗೊತ್ತಿದ್ದರೆ, ಅವರ ಜತೆ ವ್ಯವಹರಿಸುವುದು ಸುಲಭ. ಮೂಲ: ಪೋರ್ಟಲ್ ತಂಡ