ನಿಮ್ಮ ಶಾಲೆಯು ಮಗು ಸ್ನೇಹಿಯೆ? ಹಾಗಾಗಲು ಇರುವ ವಿಧಾನ:: ಬೆತ್ತ ಬಳಸದೆ ಬಾಲ್ಯ ಉಳಿಸಿ ಎಂಬುದು ಮಕ್ಕಳ, ಶಾಲೆಯ , ತಾಯಿತಂದೆಯರ ಮತ್ತು ಒಟ್ಟಾರೆಯಾಗಿ ಸಮುದಾಯದ ಘೋಷಣೆ ಮತ್ತು ಸಂದೇಶವಾಗಬೇಕು.. ಪ್ರತಿ ಶಾಲೆಯೂ ಒಬ್ಬ ತರಬೇತಿ ಪಡೆದ ಆಪ್ತ ಸಲಹೆಗಾರರನ್ನು ಹೋಂದಿರಬೇಕು.ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಯ ಲಕ್ಷಣಗಳಿರುವ ಮಕ್ಕಳ ಮತ್ತು ಅವರ ತಾಯಿತಂದೆಯರ/ ಪೋಷಕರಿಗೆ ಅಗತ್ಯವಿರುವ ಆಪ್ತಸಲಹೆ ನೀಡಿ ಸಹಾಯ ಮಾಡುವಂತಿರಬೇಕು ಶಾಲೆಯು ಸಾಮಾಜಿಕ ಕಾರ್ಯಕರ್ತನನ್ನು ಸಹಚರರ, ಕುಟುಂಬದ ಸಮುದಾಯದವರಿಂದ ಉತ್ತಮ ಪ್ರತಿಕ್ರಿಯೆ ಮೂಡಿಸಲು ಹೊಂದಿರಲೇಬೇಕು. ನಿಯತಕಲಿಕವಾದ ಕ್ರಮಬದ್ದ ತಾಯಿತಂದೆ , ಶಿಕ್ಷಕರ ಸಭೆ (PTA) ಗಳು ಶಾಲೆಯ ಅಗತ್ಯ.ಅಂಶವಾಗಬೇಕು.. PTAಗಳು ಶಿಕ್ಷಕರು , ತಾಯಿತಂದೆಯರು ಮಗುವಿನ ತರಗತಿಯ ಪ್ರಗತಿ ಮಾತ್ರವಲ್ಲದೆ, ಸರ್ವಾಂಗೀಣ ಅಭಿವೃದ್ಧಿ ಯ ಬಗ್ಗೆ ಸಂವಾದ ನೆಡೆಸುವ ವೇದಿಕೆಯಾಗಬೇಕು. ಶಿಕ್ಷಕರಿಗೆ ನೀಡುವ ಶೈಕ್ಷಣಿಕ ತರಬೇತಿಯಂತೆ ಮಕ್ಕಳ ಹಕ್ಕಿನ ಬಗ್ಗೆ ಅವರನ್ನು ಸಂವೇದನಾಶಿಲರಾಗಿಸಲು ಎಲ್ಲ ಶಾಲೆಗಳಲ್ಲಿ ತರಬೇತಿ ಮತ್ತು ಚಟುವಟಿಕೆಗಳು ಇರಬೇಕು ಶಾಲೆಯೊಳಗಡೆ ಮಕ್ಕಳಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ ಅವರು ಭಾಗವಹಿಸಲು ವೇದಿಕೆಯೊಂದು ನಿರ್ಮಾಣವಾಗಬೇಕು ಲೈಂಗಿಕ ಶಿಕ್ಷಣವು ಶಾಲೆಯಲ್ಲಿ ನೀಡುವ ಜೀವನ ಕೌಶಲ್ಯ ಶಿಕ್ಷಣದ ಮುಖ್ಯ ಭಾಗವಾಗಬೇಕು ಮೂಲ ಸೌಕರ್ಯಗಳಾದ ಶೌಚಾಲಯ (ಟಾಯಿಲೆಟ್) ಮತ್ತು ಕುಡಿಯುವ ನೀರು ಮಕ್ಕಳಿಗೆ ಶಾಲಾ ಆವರಣದಲ್ಲಿಯೇ ದೊರೆಯಬೇಕು. ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯವಿರಬೇಕು. . ಗುಡಿಸಲು ಅಥವ ಒಂದೆ ಕೋಣೆಯಲ್ಲಿ ಶಾಲೆ ನಡೆಯುತ್ತಿದ್ದರೆ ಸಾಕಷ್ಟು ಅವಧಿಯ ವಿರಾಮವನ್ನು ನೀರು ಕುಡಿಯಲು ಮತ್ತು ಶೌಚಾಲಯ ಬಳಸುವುದಕ್ಕಾಗಿ ನಿತ್ಯ ನೀಡಬೇಕು. ವಿಕಲಚೇತನ ಸ್ನೇಹಿ ಮೂಲಸೌಕರ್ಯ ಮತ್ತು ಪಾಠೋಕರಣ ಸಾಮಗ್ರಿಗಳು ಶಾಲೆಯ ವಿಕಲ ಚೇತನರ ಬಗೆಗಿನ ಸಂವೇದನೆಯನ್ನು ಪ್ರತಿಬಿಂಬಿಸವುದು .ಸಾಧ್ಯವಾದಷ್ಟು ಎಲ್ಲವನ್ನೂ ಅಥವ ನಿಮ್ಮ ಸಂಪನ್ಮೂಲದ ಮಿತಿಯಲ್ಲಿ ಕೆಲವನ್ನಾದರೂ ಪಡೆದಿರುವ ಖಾತ್ರಿ ಮಾಡಿಕೊಳ್ಳಿ .ಸ್ಥಳೀಯ ಸಂಪನ್ಮೂಲಗಳನ್ನು ಈ ಅಗತ್ಯವನ್ನು ಪೂರೈಸಿಕೊಳ್ಳಲು ಕ್ರೋಢಿಕರಿಸಬೇಕು ಶಾಲೆಯ ಆವರಣದ ಹತ್ತಿರ ಮಾರಟಗಾರರು ಇರಬಾರದು ಶಾಲೆಗಳು ತಮ್ಮ ಶಿಕ್ಷಕರು ಮಕ್ಕಳನ್ನು ಮನೆ ಕೆಲಸಕ್ಕೆ ಬಳಸುವುದನ್ನು ನಿರುತ್ತೇಜಿಸಿದರೆ, ಅವರು ಸಮುದಾಯವು ಅನುಸರಿಸ ಬಹುದಾದ ಉತ್ತಮ ಉದಾಹರಣೆ ಕೊಟ್ಟಂತಾಗುವುದು. ಸಹಚರರರ ಗುಂಪನ್ನು ರಚಿಸಿ ಮಾದಕವಸ್ತುಗಳ ದುರ್ಬಳಕೆ ಅತವ ಇನ್ನಾವುದೋ ದುರ್ಬಳಕೆಯನ್ನುಶಾಲಾ ಅವರಣದಲ್ಲಿ ನಡೆಯದಂತೆ ಮಾಡುವುದು ಶಾಲೆಗಳು ಅನುಸರಿಸಬಹುದಾದ ಉತ್ತಮನಡೆ . ಶಿಕ್ಷಕರ ಮೇಲೆ ಮತ್ತು ಶಾಲೆಯ ಇತರ ಉದ್ಯೋಗಿಗಳ ಮೇಲೆ ಶಾಲೆಯಲ್ಲಿ ಅಥವ ಹೊರಗೆ ಮಕ್ಕಳ ಲೈಂಗಿಕ ದುರ್ಬಳಕೆಯ ದೂರುಬಂದಾಗ ಶಿಸ್ತು ಕ್ರಮದ ವಿಚಾರಣೆಯನ್ನು ನಡೆಸಲು ಮಾರ್ಗದರ್ಶಿ ಸೂತ್ರಗಳಿರಬೆಕು ಲಿಂಗ, ವಿಕಲತೆ, ಜಾತಿ , ಧರ್ಮ ಅಥವ ಹೆಚ್. ಐ. ವಿ ಏಡ್ಸ್ (HIV/AIDS) ಆಧಾರದ ಮೇಲೆ ತಾರತಮ್ಯವಾದರೆ ಅದನ್ನು ನಿಭಾಯಿಸಲು ಮಾರ್ಗದರ್ಶಿಸೂತ್ರಗಳು, ನಿಯಮಗಳು, ಪದ್ದತಿಗಳು ನಿಗದಿಗೊಳ್ಳಲಿ.. ಶಾಲೆಗಳು ಮಕ್ಕಳ ರಕ್ಷಣಾ ಉಸ್ತುವಾರಿ ಕೋಶ (ಸೆಲ್) ರಚಿಸಬೇಕು. ಅದರಲ್ಲಿ ಮಕ್ಕಳು, ಅವರ ತಾಯಿತಂದೆಯರು, ಮತ್ತು ಪಂಚಾಯತಿಗಳು / ಪುರಸಭೆಗಳು ಇರಬೇಕು. ಈ ಘಟಕವು ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳ ದಾಖಲೆ ಇಡಬೇಕು.ಮತ್ತು ಮಗುವಿನ ದುರ್ಬಳಕೆಯನ್ನು ಪೋಲೀಸರಿಗೆ ಇಲ್ಲವೆ ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಮಾಡಬೇಕು ಮೂಲ: ಪೋರ್ಟಲ್ ತಂಡ